Sunday, 18 September 2011

ನಿನದೆ ನೆನಪು

ನಿನದೆ ನೆನಪನ್ನು ದಿನವು ನೇಯುವೆನು
ನೀ ರಂಗು ನೀಡಬಾರದೇ
ಎರಡು ಮನಸ್ಸಲ್ಲಿ ಉಸಿರೆಡಡು ಒಂದೇ
ಸನಿಹದಲ್ಲಿ ನೀ ಇರಬರದೇ
ನೀನೊಮ್ಮೆ ಕಂಡಾಗ ಕನಸಲ್ಲಿ ಬಂದಾಗ
ಮನಸ್ಸಿಗೆ ಹಿತವಲ್ಲವೇ
ಮುತ್ತೊಂದ ಕೊಡುವಲ್ಲಿ ಕನ್ನೆಯ ಕೆಂಪಾಗಿ
ಮಾಡೋದೆ ನಾಚಿಕೆಯಲ್ಲವೇ

ಎರಡು ಕಣ್ಣುಗಳಿಗೆ ರೆಪ್ಪೆ ಆಗಿರುವೆನು
ಕಣ್ಣ ಹನಿಯು ನಿನಗೇತಕೆ
ಕಳೆದ ಕ್ಷಣಗಳನ್ನು ಒಂದೇ ನೆನಪಲ್ಲಿ
ಬಚ್ಚಿ ಮುಚ್ಚಿಡಬಾರದೇ

ನೆರಳಾಗಿ ನಾ ನಿನ್ನ ಹಿಂದ್ ಹಿಂದೆ ಬಂದಾಗ
ನೀ ತಿರುಗಿ ನೋಡಬಾರದೇ
ಮನಸ್ಸಿನ ಪುಟದಲ್ಲಿ ಬರೆದಿರುವ ಮುನ್ನುಡಿ
ನೀನಾಗಿ ಇಡಬಾರದೇ
ನೀನಿಲ್ಲದಿರುವ ಘಳಿಗೆಯು ನನಗೆ ದಿನವೆಲ್ಲಾ ಕಾಡಿದೆ

ನನ್ನ ಹೃದಯ ಬಯಸಿದ ಹೆಜ್ಜೆಯ ಸದ್ದನ್ನು
ಮಾಡಿದ್ದು ನಿನ್ನ ಹೆಜ್ಜೆಯಲ್ಲವೇ
ಎದೆಯಲ್ಲಿ ನಿನ್ನಯ ಉಸಿರಂತೆ
ಇಂದಾದರೂ ನಾ ನಿನ್ನ ಸೋಕಬರದೇ
ನೀನಿಲ್ಲದ ಕನಸ್ಸು ನೀನಿಲ್ಲದ ಸೊಗಸು
ನನಗಿಂದು ವ್ಯಥೆಯಾಗಿದೆ

Saturday, 27 August 2011

ಮೋಡದಂತಹ ಪ್ರೀತಿ

ಮೋಡದಂತಹ ಪ್ರೀತಿಗೆ ಹನಿಹನಿ ಪ್ರೀತಿಯು ಏತಕೋ
ಹೇಳಲಾಗದ ಈ ಪ್ರೀತಿಗೆ ಮಾತು ಏತಕೋ
ಮಧುರವಾದ ಈ ಬಾವಕ್ಕೆ ವಿರಹದ ಹಾಡು ಏತಕೋ
ನಿನ್ನ ನೋಡೊ ಈ ಕಣ್ಣಿಗೆ ಲೋಕವೆಲ್ಲಾ ಈಗ ಏತಕೋ
ಎರಡು ಮನಸ್ಸಿನ ದೋರವಿರುವ ಪ್ರೀತಿಗೆ ವಿರಹ ಏತಕೋ

ನಾ ನಿನ್ನ ಪ್ರೀತಿಸುವೆ ನನ್ನ ಹೃದಯ ಬಡಿತ ನಿಂತು ಹೋದರೂ
ನಾ ನಿನ್ನ ಪ್ರೀತಿಸುವೆ ನನ್ ಎದೆಯಲ್ಲಿ ಉಸಿರು ನಿಂತು ಹೋದರೂ

ಕನಸ್ಸಿನಲ್ಲಿ ನೀ ಬರುವೆ
ನಿದಿರೆಯನ್ನು ನಾ ಮರೆವೆ
ಪ್ರತಿ ಕ್ಷಣ ನೀ ಬಂದು ನನ್ನ ಕಾಡುವೆ

ತಂಗಾಳಿಯಂತೆ ನೀನೀರುವೆ
ಬಿರುಗಾಳಿಯಾಗಿ ನೀ ಬರುವೆ
ನನ್ನ ಹಿಂದೆ ಬಂದು ಮನಸ್ಸನ್ನು ದೋಚುತ್ತಿರುವೆ

ನೀನು ಮಾತಾಡುವ ಮಾತುಗಳು ನನ್ನ ಹ್ರ್‍ಯುದಯದಲ್ಲಿಗಾ ಪ್ರತಿ ಅಕ್ಷರವು
ನೀನು ಮೆಲ್ಲಗೆ ಉಸಿರು ಬಿಡಲು ಹೃದಯದಲ್ಲಿ ಬಿರುಗಾಳಿಯು

ಮಿಂಚಿನ ನಿನ್ನ ಮೈಯ ಸ್ಪರ್ಶಿಸಿ ಮಳೆ ಹನಿಯು
ನಿನ್ನ ಕೊರಳಿಗೆ ಮುತ್ತಿನ ಹಾರವಾಯಿತು
ಮಂಜಿನ ನಿನ್ನ ತುಟಿಯ ಸ್ಪರ್ಶಿಸಿ ಆ ಸೂರ್ಯನು
ನಿನ್ನ ತುಟಿಯ ಕೆಂಪಾಗಿ ಅಡಗಿ ಹೋದನು

ನನ್ನ ಒಲವಿನ ಓಲೆಯ ತ್ವರೆಮಾಡಿ ನೀ ಓದುವೆಯ
ನನ್ನ ಎದೆಯ ಕರೆಯ ತಡ ಮಾಡದೆ ಸ್ವೀಕರಿಸುವೆಯಾ